ಮೂರುಠಾವಿನ ಬೆಂಕಿ ಮುಂದುವರಿದುರಿವ ಅರಣ್ಯದೊಳಗೊಬ್ಬ ಸೂಳೆ
ಆರಾರ ಉಳ್ಳವರನೊತ್ತೆಯ ಕೊಳ್ಳುತ್ತ ತನ್ನ ಸುಖವ ತೋರುತ್ತ
ನಗಿಸುತ್ತ, ದುಃಖವನುಣಿಸುತ್ತಲಳಿಸುತ್ತ
ಬಗೆ ಬಗೆ ಬಣ್ಣತೆಯ ತೊಡಿಸಿ,
ಕುಣಿಸುವ ಕುವರಿಯ ಕಾಲದೊಡರಿನೊಳಿರ್ದು
ಹಿರಿಯರೆನಿಸಿಕೊಂಬ ಕುರಿಮಾನವರ ನೋಡಿ
ಮರುಗುತಿರ್ದೆನು ಕಾಣಾ ನಿರಂಜನ ಚನ್ನಬಸಲಿಂಗಾ.
Art
Manuscript
Music
Courtesy:
Transliteration
Mūruṭhāvina beṅki munduvariduriva araṇyadoḷagobba sūḷe
ārāra uḷḷavaranotteya koḷḷutta tanna sukhava tōrutta
nagisutta, duḥkhavanuṇisuttalaḷisutta
bage bage baṇṇateya toḍisi,
kuṇisuva kuvariya kāladoḍarinoḷirdu
hiriyarenisikomba kurimānavara nōḍi
marugutirdenu kāṇā niran̄jana cannabasaliṅgā.