Index   ವಚನ - 41    Search  
 
ಕಾಡಡವಿಯೊಳೋರ್ವನೆ ದೆಸೆಯಗಾಣದೆ ಅಸುವಳಿವ ಕಾಲದಲ್ಲಿ, ಒಸೆದೋರ್ವ ಬಂದು ಬಾ ಬಾ ಎಂದೆತ್ತಿ ಪೊಳಲುಬಳಗದ ಮಧ್ಯ ನಿಲಿಸುವಂತೆ, ಎನ್ನಾದಿಮಧ್ಯವಸಾನವಳಿದು, ಭವಾರಣ್ಯ ಭೀತಿತ್ರಯದೊಳಿರ್ಪ ಆತ್ಮನನು ಅಭಯದಿಂದೆತ್ತಿ, ಅರಿ ಸಕಲ ಪರಿಸಿ ತಲೆದಡಹಿ, ಮೋಹದ ಮಾತಿನಿಂ ಕೈಯೊಳಗೆ ಕೈಯನಿತ್ತು ಕರುಣಿಸಿದ ಒಳಹೊರಗೆ ಸಹಜದಲ್ಲಿ ನಿರಂಜನ ಚನ್ನಬಸವಲಿಂಗವೆಂಬ ಸದ್ಗುರುನಾಥನು.