Index   ವಚನ - 42    Search  
 
ಆಹಾ ಎನ್ನಪುಣ್ಯದ ಫಲ! ನಿರಾಕಾರ ಗುರುವೆನಗೆ ಸಾಕಾರವಾಗಿ ಬಂದುದು. ಆಹಾ ಎನ್ನ ಬಹುಜನ್ಮದ ತಪಸ್ಸಿನ ಫಲ! ನಿರವಯಾನಂದ ನಿಜವೆನಗೆ ಸಾಧ್ಯವಾದುದು. ಆಹಾ ಎನ್ನ ಭಾಗ್ಯದ ನಿಧಿಯೆನಗಿತ್ತ ನಿರಂಜನ ಚನ್ನಬಸವಲಿಂಗವೆಂಬ ಸದ್ಗುರುದೇವನು.