Index   ವಚನ - 46    Search  
 
ಎನ್ನ ಪೃಥ್ವಿಸಂಬಂಧವನಳಿಸಿ ಚಿತ್ಪೃಥ್ವಿಯಲ್ಲಿ ತನ್ನ ತೋರಿ ಸಲಹಿದನು. ಎನ್ನ ಅಪ್ಪುಸಂಬಂಧವನಳಿಸಿ ಚಿದಪ್ಪುವಿನಲ್ಲಿ ತನ್ನ ತೋರಿ ಸಲಹಿದನು. ಎನ್ನ ಅಗ್ನಿಸಂಬಂಧವನಳಿಸಿ ಚಿದಗ್ನಿಯಲ್ಲಿ ತನ್ನ ತೋರಿ ಸಲಹಿದನು. ಎನ್ನ ವಾಯುಸಂಬಂಧವನಳಿಸಿ ಚಿದ್ವಾಯುವಿನಲ್ಲಿ ತನ್ನ ತೋರಿ ಸಲಹಿದನು. ಎನ್ನಾಕಾಶಸಂಬಂಧವನಳಿಸಿ ಚಿದಾಕಾಶದಲ್ಲಿ ತನ್ನ ತೋರಿ ಸಲಹಿದನು. ಎನ್ನಾತ್ಮಸಂಬಂಧವನಳಿಸಿ ಚಿದಾತ್ಮದಲ್ಲಿ ತನ್ನ ತೋರಿ ಸಲಹಿದನು. ಎನ್ನ ಸ್ಥೂಲಾಂಗಸಂಬಂಧವನಳಿಸಿ ತ್ಯಾಗಾಂಗವೆನಿಸಿ ತನ್ನ ತೋರಿ ಸಲಹಿದನು. ಎನ್ನ ಸೂಕ್ಷ್ಮಾಂಗಸಂಬಂಧವನಳಿಸಿ ಭೋಗಾಂಗವೆನಿಸಿ ತನ್ನ ತೋರಿ ಸಲಹಿದನು. ಎನ್ನ ಕಾರಣಾಂಗಸಂಬಂಧವನಳಿಸಿ ಯೋಗಾಂಗವೆನಿಸಿ ತನ್ನ ತೋರಿ ಸಲಹಿದನು. ಎನ್ನ ಸರ್ವಾಂಗಸಂಬಂಧವನಳಿಸಿ ಸರ್ವಾಂಗದಲ್ಲಿ ಸರ್ವಾಚಾರಸಂಪತ್ತು ತೋರಿ ಸಲಹಿದ ನಿತ್ಯವಾಗಿ ನಿರಂಜನ ಚನ್ನಬಸವಲಿಂಗ.