Index   ವಚನ - 48    Search  
 
ಎನ್ನರುಹಿನಲ್ಲಿ ಗುರುವಾಗಿ ಬಂದು ನಿಂದಾನು, ಎನ್ನ ಪ್ರಾಣದಲ್ಲಿ ಲಿಂಗವಾಗಿ ಬಂದು ನಿಂದಾನು, ಎನ್ನ ಜ್ಞಾನದಲ್ಲಿ ಜಂಗಮವಾಗಿ ಬಂದು ನಿಂದಾನು, ಎನ್ನ ಘ್ರಾಣದಲ್ಲಿ ಪ್ರಸಾದವಾಗಿ ಬಂದು ನಿಂದಾನು, ಎನ್ನ ಜಿಹ್ವೆಯಲ್ಲಿ ಪಾದೋದಕವಾಗಿ ಬಂದು ನಿಂದಾನು, ಎನ್ನ ನೇತ್ರದಲ್ಲಿ ರುದ್ರಾಕ್ಷಿಯಾಗಿ ಬಂದು ನಿಂದಾನು, ಎನ್ನ ತ್ವಕ್ಕಿನಲ್ಲಿ ವಿಭೂತಿಯಾಗಿ ಬಂದು ನಿಂದಾನು, ಎನ್ನ ಶ್ರೋತ್ರದಲ್ಲಿ ಪಂಚಾಕ್ಷರಿಮಂತ್ರವಾಗಿ ಬಂದು ನಿಂದಾನು, ಇಂತು ಎನ್ನಂಗದಲ್ಲಿ ಅಷ್ಟಾವರಣವಾಗಿ ಕರಸ್ಥಲಕ್ಕೆ ಇಷ್ಟಲಿಂಗವಾಗಿ ಬಂದು ನಿಂದಾನು, ನಿರಂಜನ ಚನ್ನಬಸವಲಿಂಗ ತಾನೆ ನೋಡ; ಎನ್ನ ಗುರುವರನು.