Index   ವಚನ - 78    Search  
 
ಅಯ್ಯಾ, ಮಹದಾನಂದ ಸದ್ಗುರುವಿತ್ತ, ಪರಮಾಚಾರ ಪರಿಪೂರ್ಣೈಶ್ವರ್ಯವೆಂಬ ಪರಮರುದ್ರಾಕ್ಷಿಯ ಎಂಟೇಳು ಮಣಿಮಾಲೆಯನು ಲಿಂಗಕ್ಕೆ ಧರಿಸಿ, ಒಂಬತ್ತು ಮಣಿಮಾಲೆಯನು ಲಿಂಗಕ್ಕೆ ಧರಿಸಿ ಲಿಂಗಭಕ್ತನಾದೆನಯ್ಯಾ. ಒಂದೆಂಟು ಮಣಿಮಾಲೆಯ ಲಿಂಗಕ್ಕೆ ಧರಿಸಿ, ಒಂದೆಂಟು ಮಣಿಯ ಆನು ಧರಿಸಿ ಲಿಂಗಮಹೇಶ್ವರನಾದೆನಯ್ಯಾ. ಒಂದಾರು ಮಾಲೆಯ ಲಿಂಗಕ್ಕಿತ್ತು, ಮೂರಾರು ಮಾಲೆಯ ಆನು ಧರಿಸಿ ಶಿವಪ್ರಸಾದಿಯಾದೆನಯ್ಯಾ. ಒಂದು ನಾಲ್ಕು ಮಾಲೆಯ ಲಿಂಗಕ್ಕಿತ್ತು, ಹನ್ನೆರಡು ಮಾಲೆಯ ಆನು ಧರಿಸಿ ಪ್ರಾಣಲಿಂಗಿಯಾದೆನಯ್ಯಾ. ಒಂದು ಮೂರು ಮಾಲೆಯ ಲಿಂಗಕ್ಕಿತ್ತು, ಆರು ಮೂರು ಮಾಲೆಯ ಆನು ಧರಿಸಿ ಶಿವಶರಣನಾದೆನಯ್ಯಾ. ಒಂದು ಮೂರು ಮಾಲೆಯ ಲಿಂಗಕ್ಕಿತ್ತು, ಮೂರು ಮೂರು ಮೂರು ಮಾಲೆಯ ಆನು ಧರಿಸಿ ಲಿಂಗೈಕ್ಯನಾದೆನಯ್ಯಾ. ಇಂತು ಸರ್ವಾಂಗದಲ್ಲಿ ಧರಿಸಿ ನಿರಂಜನ ಚನ್ನಬಸವಲಿಂಗಾಂಗಸ್ಥಲಕುಳವನರಿದು ಸುಖಿಯಾಗಿರ್ದೆನಯ್ಯಾ.