ಪಂಚಾಕ್ಷರಸಂಬಂಧವಾದ ನಿಜಾನಂದ ಶರಣ
ಗಜಬಜೆಯ ಗೋಷ್ಠಿಗಳನೊಮ್ಮೆ ತೋರ.
ಅದೇನು ಕಾರಣವೆಂದೊಡೆ :
ಆತನ ಜಿಹ್ವೆ ಪಂಚಾಕ್ಷರವ ನೆನೆದು
ಪಂಚಲಿಂಗಸಂಬಂಧವಾದ ಕಾರಣ
ಸಕಲ ತತ್ವಾತತ್ವಂಗಳೆಲ್ಲ ಲಿಂಗಮಯವಾಗಿ ಕಾಣುತಿರ್ದುದು ;
ಇತರ ನುಡಿಯನರಿಯದಿರ್ದ
ನಿರಂಜನ ಚನ್ನಬಸವಲಿಂಗದಲ್ಲಿ.
Art
Manuscript
Music
Courtesy:
Transliteration
Pan̄cākṣarasambandhavāda nijānanda śaraṇa
gajabajeya gōṣṭhigaḷanom'me tōra.
Adēnu kāraṇavendoḍe:
Ātana jihve pan̄cākṣarava nenedu
pan̄caliṅgasambandhavāda kāraṇa
sakala tatvātatvaṅgaḷella liṅgamayavāgi kāṇutirdudu;
itara nuḍiyanariyadirda
niran̄jana cannabasavaliṅgadalli.