ಮಡಿಕೆ ಮಣ್ಣಾಗಲರಿಯದು,
ವಹ್ನಿ ಕಾಷ್ಠವಾಗಲರಿಯದು,
ಮುತ್ತು ನೀರಾಗಲರಿಯದು,
ಸತ್ಯ ಗುರುವಿನಿಂದುಪದೇಶವಡೆದ
ನಿತ್ಯ ಶರಣನ ಜಿಹ್ವೆ ಪ್ರಸಾದ
ಮಂತ್ರವಾಗಿರ್ದು ಉಚ್ಫಿಷ್ಟವಾಗಲರಿಯದು
ನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Maḍike maṇṇāgalariyadu,
vahni kāṣṭhavāgalariyadu,
muttu nīrāgalariyadu,
satya guruvinindupadēśavaḍeda
nitya śaraṇana jihve prasāda
mantravāgirdu ucphiṣṭavāgalariyadu
niran̄jana cannabasavaliṅgā.