Index   ವಚನ - 104    Search  
 
ಸ್ವಯಾನಂದ ಪರಬ್ರಹ್ಮವೆ ಆನು ಬಂದೆನಯ್ಯಾ ನೀನೆಂಬ ಕುಶಲಗತಿಗತಿಶಯವಾಗಿ, ಅವಧಾರಯ್ಯಾ ಸತ್ತುಚಿತ್ತಾನಂದ ಮೂರ್ತಿಯೇ ಸ್ಥೂಲ ಸೂಕ್ಷ್ಮ ಕಾರಣವ ನೋಡಯ್ಯಾ. ಎನ್ನ ಸ್ಥೂಲಾಂಗದ ಸೌಖ್ಯವನು ಕೊಳ್ಳಯ್ಯಾ ಎನ್ನ ಸದ್ರೂಪಸ್ವರೂಪವಾದ ಗುರುವೆ. ಎನ್ನ ಸೂಕ್ಷ್ಮಾಂಗದ ಸುಲಲಿತಸುಖವ ಕೊಳ್ಳಯ್ಯಾ ಎನ್ನ ಚಿನ್ನಾದಸ್ವರೂಪವಾದ ಲಿಂಗವೆ. ಎನ್ನ ಕಾರಣಾಂಗದ ತೃಪ್ತಿ ತನಿರಸವ ಕೊಳ್ಳಯ್ಯಾ ಎನ್ನ ಆನಂದಸ್ವರೂಪವಾದ ಮಹಾನುಭಾವ ಜಂಗಮವೆ. ಒಂದೆರಡಾಟವನಾಡುವ ಬಾರಯ್ಯ ಸರಿಯಾಗಿ ಗುರುನಿರಂಜನ ಚನ್ನಬಸವಲಿಂಗಾ.