ಗುರು ಶಿಷ್ಯ, ಲಿಂಗ ಭಕ್ತ, ಜಂಗಮ ಶರಣ,
ಭಾವದಂಗವರಿಯಬಂದ
ನಿಜಾನಂದ ನಿಲವಿಗೆ ನಾನರಿದರಿದಾನಂದಮುಖನಾಗಿಹೆನು.
ಕಾಯವರಿಯದು ಮನವರಿಯದು
ಪ್ರಾಣವರಿಯದು ಭಾವವರಿಯದು
ನಡೆ ನುಡಿ ನೋಟವರಿಯವು
ಗುರುನಿರಂಜನ ಚನ್ನಬಸವಲಿಂಗ ನೀನಲ್ಲದೆ.
Art
Manuscript
Music
Courtesy:
Transliteration
Guru śiṣya, liṅga bhakta, jaṅgama śaraṇa,
bhāvadaṅgavariyabanda
nijānanda nilavige nānaridaridānandamukhanāgihenu.
Kāyavariyadu manavariyadu
prāṇavariyadu bhāvavariyadu
naḍe nuḍi nōṭavariyavu
guruniran̄jana cannabasavaliṅga nīnallade.