Index   ವಚನ - 111    Search  
 
ಎನ್ನ ಕಾಲು ನಡೆಶೃಂಗರಿಸುತಿರ್ದವು, ಎನ್ನ ನಾಸಿಕ ಭಕ್ತಿವಾಸನೆಯ ಶೃಂಗರಿಸುತಿರ್ದುದು. ಎನ್ನ ಜಿಹ್ವೆ ನುಡಿಶೃಂಗರಿಸುತಿರ್ದುದು. ಎನ್ನ ಕಂಗಳು ನೋಟಶೃಂಗರಿಸುತಿರ್ದವು, ಎನ್ನ ತ್ವಕ್ಕು ಸೇವಾನುಕೂಲಿಗೆ ಶೃಂಗರಿಸುತಿರ್ದುದು. ಎನ್ನ ಕರ್ಣ ಆಲಿಸಲನುಗೈಯುತಿರ್ದವು. ಎನ್ನ ಭಾವ ಸಮರಸಾನಂದಸುಖವ ಕೊಂಬುವುದಕ್ಕೆ ಶೃಂಗರಿಸುತಿರ್ದುದು ಗುರುನಿರಂಜನ ಚನ್ನಬಸವಲಿಂಗವೆಂಬ ಗುರುಲಿಂಗ ಜಂಗಮಕ್ಕೆ ನಿರಂತರ.