Index   ವಚನ - 110    Search  
 
ಗುರು ಶಿಷ್ಯ, ಲಿಂಗ ಭಕ್ತ, ಜಂಗಮ ಶರಣ, ಭಾವದಂಗವರಿಯಬಂದ ನಿಜಾನಂದ ನಿಲವಿಗೆ ನಾನರಿದರಿದಾನಂದಮುಖನಾಗಿಹೆನು. ಕಾಯವರಿಯದು ಮನವರಿಯದು ಪ್ರಾಣವರಿಯದು ಭಾವವರಿಯದು ನಡೆ ನುಡಿ ನೋಟವರಿಯವು ಗುರುನಿರಂಜನ ಚನ್ನಬಸವಲಿಂಗ ನೀನಲ್ಲದೆ.