Index   ವಚನ - 122    Search  
 
ಎಲೆ ಸಂಸಾರಿ ಜಂಗಮವೆ ಎನ್ನ ಗೃಹಕ್ಷೇತ್ರದ ಸುಖವನರಿಯದೆ ಅರಿದವನಲ್ಲ ಬನ್ನಿ. ಎನ್ನ ಸ್ತ್ರೀಯಾದಿ ಸೌಖ್ಯವನರಿಯದೆ ಅರಿದವನಲ್ಲ ಬನ್ನಿ. ಎನ್ನ ಕನಕಾದಿ ದ್ರವ್ಯಂಗಳ ಸುಖವನರಿಯದೆ ಅರಿದವನಲ್ಲ ಬನ್ನಿ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಬರವಿಂಗೆ ನೈಷ್ಠೆ ಮುಂದೆ ಉಲಿಯುತ್ತಿದೆ ಬನ್ನಿ.