Index   ವಚನ - 126    Search  
 
ಗುರುಭಕ್ತನಾದ ಮೇಲೆ ಅಂಗದ ಸುಖವ ಮರೆದಿರಬೇಕು. ಲಿಂಗಭಕ್ತನಾದ ಮೇಲೆ ಮನದ ಸುಖವ ಮರೆದಿರಬೇಕು. ಜಂಗಮಭಕ್ತನಾದಮೇಲೆ ಪ್ರಾಣದ ಸುಖವ ಮರೆದಿರಬೇಕು. ಪಾದೋದಕಭಕ್ತನಾದ ಮೇಲೆ ರಸನೆಯ ಸುಖವ ಮರೆದಿರಬೇಕು. ಪ್ರಸಾದಭಕ್ತನಾದ ಮೇಲೆ ಅನ್ಯವಾಸನೆಯ ಸುಖವ ಮರೆದಿರಬೇಕು. ವಿಭೂತಿಯ ಧರಿಸಿದ ಮೇಲೆ ಸೋಂಕಿನ ಸುಖವ ಮರೆದಿರಬೇಕು. ರುದ್ರಾಕ್ಷಿಯ ಧರಿಸಿದ ಮೇಲೆ ಸ್ತ್ರೀರೂಪಿನ ಲಕ್ಷಣ ಮರೆದಿರಬೇಕು. ಮಂತ್ರವೇದಿಯಾದ ಮೇಲೆ ಲಲನೆಯರ ವಿನಯ ನುಡಿಯ ಒಲಿದು ಕೇಳದಿರಬೇಕು. ಇಂತು ಅಷ್ಟಾವರಣವನು ಅಂಗದಲ್ಲಿ ಕಾಣಿಸಿಕೊಂಡ ಬಳಿಕ ಭಕ್ತಿ ನಿಷ್ಠೆಯ ನೆರೆದು ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಚ್ಚರಿತನಾಗಿರಬೇಕು.