Index   ವಚನ - 150    Search  
 
ಅಚ್ಚ ಮುತ್ತೈದೆರೈವರೆನ್ನಿಚ್ಫೆಯೊಳಗಿಪ್ಪರು ನಿಮ್ಮಾದಿ ಶಿಶುವಾದಕಾರಣ. ನಚ್ಚಿ ಮಾಡಿದಡಿಗೆಯು ಅಚ್ಚಳಿಯದಿದ್ದಿತ್ತು ಆಡುತ ಬನ್ನಿ ಮೂವರೊಂದಾಗಿ. ಬೇಡಿಕೊಂಬುವನಲ್ಲ, ನೀಡಿ ನೂಕಿ ನಿಲ್ಲುವೆ ನಿಮ್ಮಾಣೆ ಗುರುನಿರಂಜನ ಚನ್ನಬಸವಲಿಂಗದಲ್ಲಿ.