Index   ವಚನ - 173    Search  
 
ಬಿಳಿಯಶೃಂಗಾರದಂಗನೆ ಸಂಗವಮಾಡಿ ಕುಲಗೆಟ್ಟಳು ನೋಡಾ! ಆರಾರ ಮನೆಯ ಹೊಕ್ಕು, ಅಲ್ಲಲ್ಲೆ ನಲ್ಲರ ಕೂಡಿ ಉಂಡು ಭೋಗವ ಮಾಡುತ್ತಿರಲು, ಗಂಡಸಹಿತ ಮಾವ ಮುತ್ತೆಯರು ಬಂದು ಬಂದು ಕಾಡಿದರೆ ಮಂಡಲಪತಿಗೊಂದು ಲಕ್ಷವನಿಟ್ಟು ಕಾಲು ಕೈಹಿಡಿದು, ವೀಳ್ಯೆಯಿಂದೆ ಅವರ ಮನ್ನಿಸಿ, ಕಪ್ಪವ ಕೊಟ್ಟು, ಒಲುಮೆಯ ಪಡೆದು ಓಲಾಡುತಿರ್ದಳು ನೋಡಾ, ಗುರುನಿರಂಜನ ಚನ್ನಬಸವಲಿಂಗಾ ನಿಮ್ಮಾದಿಕುಳದಂಗನೆ ನೋಡಾ!