Index   ವಚನ - 193    Search  
 
ಗುರುಭಕ್ತಿಯ ಮಾಡುವೆ ಗುರುವನರಿಯದೆ. ಲಿಂಗಭಕ್ತಿಯ ಮಾಡುವೆ ಲಿಂಗವನರಿಯದೆ. ಜಂಗಮಭಕ್ತಿಯ ಮಾಡುವೆ ಜಂಗಮವನರಿಯದೆ. ಪ್ರಸಾದಭಕ್ತಿಯ ಮಾಡುವೆ ಪ್ರಸಾದವನರಿಯದೆ. ಚತುರ್ವಿಧಸಾರಾಯ ಸಗುಣಾನಂದಸುಖಿ ಚತುರ್ವಿಧಸಾರಾಯವನರಿಯದೆ ಗುರುನಿರಂಜನ ಚನ್ನಬಸವಲಿಂಗದೊಡಲುಗೊಂಡು ಉಲುಹನರಿಯದಿರ್ದೆನು.