Index   ವಚನ - 198    Search  
 
ಭಕ್ತ ಭವಿಯಾಗಲರಿಯನು, ಭವಿ ಭಕ್ತನಾಗಲರಿಯನು. ಬೇವು ಸಿಹಿಯಾಗಲುಂಟೆ? ಭವಿಯ ತಂದು ಭಕ್ತನ ಮಾಡಿದರೆ ಮಾಟಕರ ನೋಟವ ಬಲ್ಲನೆ? ನೋಟಹೀನನ ಮಾಟ ಕೂಟಕ್ಕೆ ದೂರ ಗುರುನಿರಂಜನ ಚನ್ನಬಸವಲಿಂಗಕ್ಕಂಗವಾದಖಂಡ ಭಕ್ತನಲ್ಲದೆ.