Index   ವಚನ - 199    Search  
 
ಮದವಳಿದು ಗುರುಭಕ್ತಿಗೂಡಿ ಬಂದನಯ್ಯಾ ನಿಮ್ಮ ಶ್ರದ್ಧಾಭಕ್ತ. ಕಾಮವಳಿದು ಲಿಂಗಭಕ್ತಿಗೂಡಿ ಬಂದನಯ್ಯಾ ನಿಮ್ಮ ನಿಷ್ಠಾಭಕ್ತ. ಮತ್ಸರವಳಿದು ಜಂಗಮಭಕ್ತಿಗೂಡಿ ಬಂದನಯ್ಯಾ ನಿಮ್ಮ ಸಾವಧಾನಭಕ್ತ. ಮೋಹವನಳಿದು ಪಾದೋದಕಪ್ರಸಾದ ಭಕ್ತಿಯಗೂಡಿ ಬಂದನಯ್ಯಾ ನಿಮ್ಮ ಅನುಭಾವಭಕ್ತ. ಕ್ರೋಧವನಳಿದು ವಿಭೂತಿ ರುದ್ರಾಕ್ಷಿಭಕ್ತಿಗೂಡಿ ಬಂದನಯ್ಯಾ ನಿಮ್ಮ ಆನಂದಭಕ್ತ. ಲೋಭವನಳಿದು ಪಂಚಾಕ್ಷರಿಭಕ್ತಿಗೂಡಿ ಬಂದನಯ್ಯಾ ನಿಮ್ಮ ಸಮರಸಭಕ್ತ. ಇಂತು ಅಷ್ಟಾವರಣದ ಭಕ್ತಿಸಂಯುಕ್ತವಾಗಿ ಗುರುನಿರಂಜನ ಚನ್ನಬಸವಲಿಂಗಕ್ಕೆ ಅಂಗವಾಗಿ ಬಂದನಯ್ಯಾ ನಿಮ್ಮ ನಿಜಭಕ್ತ.