ಮೂವರು ಮುಟ್ಟದ ದೇವ ದೇವರದೇವನ
ಭಾವದಿಂ ತೆಗೆದುಕೊಟ್ಟ ಗುರುವಿನ ಮಗನೆಂದು ನುಡಿದು ನಡೆವಲ್ಲಿ
ಇದನಳಿದು ಅಧೋದ್ವಾರದಿಂದೆ ಬಂದೆನೆಂಬ ಭಾವ ದಿಟವಾಗಿ,
ಮಾಯೋಚ್ಫಿಷ್ಟ ಮದಮೋಹಿತನಾಗಿ
ತಂದೆ ತಾಯಿ ಬಂಧು ಬಳಗ ನನ್ನದೆಂದು ನುಡಿದು,
ಹಂದಿ ನಾಯಿಯ ಜನ್ಮಕ್ಕೆ ಬಂದು ಬಿದ್ದು ಹೋಗುವ
ಮಂದಮತಿ ಮಾದಿಗರನೇನೆಂಬೆನಯ್ಯಾ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Mūvaru muṭṭada dēva dēvaradēvana
bhāvadiṁ tegedukoṭṭa guruvina maganendu nuḍidu naḍevalli
idanaḷidu adhōdvāradinde bandenemba bhāva diṭavāgi,
māyōcphiṣṭa madamōhitanāgi
tande tāyi bandhu baḷaga nannadendu nuḍidu,
handi nāyiya janmakke bandu biddu hōguva
mandamati mādigaranēnembenayyā
guruniran̄jana cannabasavaliṅgā.