Index   ವಚನ - 216    Search  
 
ಹೊನ್ನ ನೋಡಿ ಹೊನ್ನ ಹಿಡಿಯದಿರ್ದಡೆ ಮಹೇಶ್ವರ. ಹೆಣ್ಣ ನೋಡಿ ಹೆಣ್ಣ ಹಿಡಿಯದಿರ್ದಡೆ ಮಹೇಶ್ವರ. ಮಣ್ಣ ನೋಡಿ ಮಣ್ಣ ಹಿಡಿಯದಿರ್ದಡೆ ಮಹೇಶ್ವರ. ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತನಾಗಿ ಭಿನ್ನವಿಲ್ಲದೆ ನಡೆಯಬಲ್ಲರೆ ಆತನಚ್ಚ ಮಹೇಶ್ವರ.