ಬಹುಜನ್ಮಭಾರಿಗಳ ಕರತಂದು
ಹಿರಿಯತನದಾಸೆಗೆ ಹರಿದು ಉಪದೇಶವ ಕೊಟ್ಟರೆ
ಗುರುಶಿಷ್ಯಭಾವ ಸರಿಯಪ್ಪುದೆ?
ಕಣ್ಣಿಲ್ಲದ ಗುರು, ಕುರುಡ ಶಿಷ್ಯ,
ಅವರಿಗಾಚಾರ ವಿಚಾರ
ಸಮಯಾಚಾರಸಂಬಂಧವೆಂತಪ್ಪುದಯ್ಯಾ,
ಭೂತ ಅದ್ಭೂತ ಅವಿಚಾರ ಘಟಿತರಿಗೆ
ಗುರುನಿರಂಜನ ಚನ್ನಬಸವಲಿಂಗಾ?
Art
Manuscript
Music
Courtesy:
Transliteration
Bahujanmabhārigaḷa karatandu
hiriyatanadāsege haridu upadēśava koṭṭare
guruśiṣyabhāva sariyappude?
Kaṇṇillada guru, kuruḍa śiṣya,
avarigācāra vicāra
samayācārasambandhaventappudayyā,
bhūta adbhūta avicāra ghaṭitarige
guruniran̄jana cannabasavaliṅgā?