Index   ವಚನ - 220    Search  
 
ಆಸೆಗೆ ಹುಟ್ಟಿದ ಭಾಷೆಹೀನ ವೇಷಧಾರಿಗಳು ಸಹಜವನೆತ್ತ ಬಲ್ಲರಯ್ಯಾ? ಭಕ್ತಿ ಯುಕ್ತಿ ವಿರಕ್ತಿಯ ಪಥವನರಿಯದೆ ಸತ್ತು ಹುಟ್ಟುವ ಮುಕ್ತಿಗೇಡಿಗಳೆತ್ತ ಬಲ್ಲರಯ್ಯಾ ಲಿಂಗದ ನಿಜವ? ಅರ್ಥವ ಹಿಡಿದು, ಅರಿವ ಮರೆದು, ಕರ್ತುಗಳಾಪ್ಯಾಯನವರಿಯದ ಅನುಮಾನಭರಿತ ಅಧಮರುಗಳೆತ್ತ ಬಲ್ಲರಯ್ಯಾ ಗುರುನಿರಂಜನ ಚನ್ನಬಸವಲಿಂಗ ಶರಣರ ಘನವ.