ಇಷ್ಟಲಿಂಗವನು ಅಂಗದ ಮೇಲೆ ಧರಿಸಿಕೊಂಡು
ಸೃಷ್ಟಿಯೊಳುಳ್ಳ ಸ್ಥಾವರಕ್ಕೆ ಮೆಚ್ಚಿ ಮಾಡಿ,
ಮುಕ್ತಿಯ ಕಂಡವರುಂಟೆ ಮೂಜಗದೊಳಗೆ?
ಬಲ್ಲರೆ ಹರಗುರುವಾಕ್ಯದಲ್ಲಿ ತೋರಿ ನಾಚಿಸುವುದು,
ಇಲ್ಲದಿರ್ದಡೆ ನಿಮ್ಮ ಮುಖದಲ್ಲಿ ಮಾಯೋಚ್ಫಿಷ್ಟ.
ಅದಲ್ಲದೆ ಶೈವರಿಗೆ ಸಲ್ಲುವ ಮಾರ್ಗ ನಮಗುಂಟೆಂದು
ಬರುನುಡಿಯ ಬೊಗಳಿದರೆ ಕತ್ತೆ ನಾಯಿ ಗೂಗಿಗಳೆಂದು
ಹರಿದುನೂಕುವನತ್ತ
ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
Art
Manuscript
Music
Courtesy:
Transliteration
Iṣṭaliṅgavanu aṅgada mēle dharisikoṇḍu
sr̥ṣṭiyoḷuḷḷa sthāvarakke mecci māḍi,
muktiya kaṇḍavaruṇṭe mūjagadoḷage?
Ballare haraguruvākyadalli tōri nācisuvudu,
illadirdaḍe nim'ma mukhadalli māyōcphiṣṭa.
Adallade śaivarige salluva mārga namaguṇṭendu
barunuḍiya bogaḷidare katte nāyi gūgigaḷendu
haridunūkuvanatta
guruniran̄jana cannabasavaliṅga sākṣiyāgi.