ಅಷ್ಟಮದಸೂತಕದ ಕೆಟ್ಟಗುಣವಳಿದುಳಿದು,
ಇಷ್ಟಲಿಂಗದಲ್ಲಿ ನಿಷ್ಠೆ ನಿಬ್ಬೆರಸಿದ ವೀರಮಾಹೇಶ್ವರನ
ಘನಮಹಿಮೆಯನಾರು ಬಲ್ಲರು ಹೇಳಾ!
ಪರಮನಾಣತಿವಿಡಿದು, ಪೊಡವಿಯೊಳು ಬಂದು,
ನಡೆಗೆಟ್ಟ ಜಡರುಗಳ ಕಡೆದಾರಿಯನು ತೋರಿ
ಹಿಡಿದು ನಡೆಸಿದ ಕಡುಗಲಿಯನಾರು ಬಲ್ಲರು ಹೇಳಾ!
ಗಮನಾಗಮನವಾದಿಗಳನಮಿತಕ್ಕಗಣಿತ
ಗಮನಾಗಮನ ಗುರುನಿರಂಜನ ಚನ್ನಬಸವಲಿಂಗ
ಸನ್ನಿಹಿತದಿರವನಾರುಬಲ್ಲರು ಹೇಳಾ!
Art
Manuscript
Music
Courtesy:
Transliteration
Aṣṭamadasūtakada keṭṭaguṇavaḷiduḷidu,
iṣṭaliṅgadalli niṣṭhe nibberasida vīramāhēśvarana
ghanamahimeyanāru ballaru hēḷā!
Paramanāṇativiḍidu, poḍaviyoḷu bandu,
naḍegeṭṭa jaḍarugaḷa kaḍedāriyanu tōri
hiḍidu naḍesida kaḍugaliyanāru ballaru hēḷā!
Gamanāgamanavādigaḷanamitakkagaṇita
gamanāgamana guruniran̄jana cannabasavaliṅga
sannihitadiravanāruballaru hēḷā!