ತಂದೆಯ ಹೆಸರ ಮಗನಮಡದಿಗೆ
ಮಿಂಡರು ಮೂವರು ನೋಡಾ.
ಒಬ್ಬಂಗೆ ಕೈಗೊಟ್ಟು ಗುದ್ಯಾಡುವಳು,
ಒಬ್ಬಂಗೆ ಮಾತುಕೊಟ್ಟು ಚಿಂತಿಸುವಳು,
ಒಬ್ಬನ ನೆರೆದು ಸುಖಿಸುವಳು,
ಇಂತಪ್ಪ ನಿತ್ಯ ನೇಮದ ಹಾದರಗಿತ್ತಿಗೆ
ಗುರುನಿರಂಜನ ಚನ್ನಬಸವಲಿಂಗವ
ಕೂಡುವಳೆಂದು ನಗುವರು ಶರಣರು.
Art
Manuscript
Music
Courtesy:
Transliteration
Tandeya hesara maganamaḍadige
miṇḍaru mūvaru nōḍā.
Obbaṅge kaigoṭṭu gudyāḍuvaḷu,
obbaṅge mātukoṭṭu cintisuvaḷu,
obbana neredu sukhisuvaḷu,
intappa nitya nēmada hādaragittige
guruniran̄jana cannabasavaliṅgava
kūḍuvaḷendu naguvaru śaraṇaru.