ವೇಷಕ್ಕೆ ತಕ್ಕ ಭಾಷೆಯುಳ್ಳರೆ ಹಿರಿಯರು ಮೆಚ್ಚುವರು.
ರಾಜಂಗೆ ಯಾಚಕತನ ಹೀನ,
ಅಂಗದ ಮೇಲೆ ಲಿಂಗಸನ್ನಿಹಿತನಾಗಿ
ಶಿವಜ್ಞಾನ ಬೀಜ, ಭಕ್ತನ ಬಂಧುತ್ವ, ದ್ರವ್ಯತ್ರಯಲಿಂಗಾರ್ಪಣವೆಂಬ
ತ್ರಿವಿಧಾಚರಣೆಸಂಪನ್ನ ವೀರಮಾಹೇಶ್ವರ
ವೇಷವ ಹೊತ್ತುಕೊಂಡು, ಕಾಸು ವಿಷಯಾದಿಗಳಿಗಾಸೆಮಾಡಿ,
ಜಡಸಂಸಾರದೊಳಗಿರ್ಪ ಜನರಿಗೆ ಕೈಯಾಂತು ಬೇಡಿ ಬೆಂಡಾಗಿ
ತಿರುಗಿ ಹೊತ್ತುಗಳೆದರೆ ಹಳಸಿತ್ತು ವೇಷ, ಮುಳಿಸಿತ್ತು ಭಾಷೆ,
ಮುಂದೆ ಕೆಡಹಿತ್ತು ಆಸೆ ದುರ್ಗತಿ
ಗುರುನಿರಂಜನ ಚನ್ನಬಸವಲಿಂಗವನರಿಯದೆ.
Art
Manuscript
Music
Courtesy:
Transliteration
Vēṣakke takka bhāṣeyuḷḷare hiriyaru meccuvaru.
Rājaṅge yācakatana hīna,
aṅgada mēle liṅgasannihitanāgi
śivajñāna bīja, bhaktana bandhutva, dravyatrayaliṅgārpaṇavemba
trividhācaraṇesampanna vīramāhēśvara
vēṣava hottukoṇḍu, kāsu viṣayādigaḷigāsemāḍi,
jaḍasansāradoḷagirpa janarige kaiyāntu bēḍi beṇḍāgi
tirugi hottugaḷedare haḷasittu vēṣa, muḷisittu bhāṣe,
munde keḍahittu āse durgati
guruniran̄jana cannabasavaliṅgavanariyade.