ಸಹಜಭಕ್ತರಿಂದೆ ಮಾಜದೆ ಪೂಜೆಗೊಂಬ
ಒಡೆಯರು ತಾವಾದಬಳಿಕ,
ಮೂಜಗವಪ್ಪಿ, ಶಿವಶರಣರಪ್ಪಿ, ಮಾಯಾಮಲವಿರಹಿತರಾಗಿ,
ಭಕ್ತಿ ಜ್ಞಾನ ವೈರಾಗ್ಯವೇ ಮುಂದುಗೊಂಡು
ಲೀಲೆಯುಳ್ಳನ್ನಬರ ಆಚರಿಸಬೇಕಲ್ಲದೆ,
ಕಾಯವನು ಮಣ್ಣಿನೊಳು ಸಿಕ್ಕಿಸಿ ಕೋಟಲೆಗೊಳ್ಳುತ್ತ,
ಕರಣವನು ಹೆಣ್ಣಿನ ವಿಷಯವಿಕಾರಭ್ರಾಂತಿಗೊಳಿಸುತ್ತ,
ಆತ್ಮನನುಳಿದು ದುಸ್ಸಂಸಾರ ಪ್ರಪಂಚದೊಳು ಮುಳುಗಿಸಿ ಕಳವಳಿಸುತ್ತ,
ದುಷ್ಕರ್ಮ ಗಳಿಸಿ ಭವರಾಟಣಂಗೈವ ನರಕಿಗಳಿಗೆತ್ತಣ ದೇವತ್ವವಯ್ಯಾ,
ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರವಾದ ದುರ್ಮತಿಗಳಿಗೆ.
Art
Manuscript
Music
Courtesy:
Transliteration
Sahajabhaktarinde mājade pūjegomba
oḍeyaru tāvādabaḷika,
mūjagavappi, śivaśaraṇarappi, māyāmalavirahitarāgi,
bhakti jñāna vairāgyavē mundugoṇḍu
līleyuḷḷannabara ācarisabēkallade,
kāyavanu maṇṇinoḷu sikkisi kōṭalegoḷḷutta,
karaṇavanu heṇṇina viṣayavikārabhrāntigoḷisutta,
ātmananuḷidu dus'sansāra prapan̄cadoḷu muḷugisi kaḷavaḷisutta,
duṣkarma gaḷisi bhavarāṭaṇaṅgaiva narakigaḷigettaṇa dēvatvavayyā,
guruniran̄jana cannabasavaliṅgakke dūravāda durmatigaḷige.