Index   ವಚನ - 255    Search  
 
ಪೃಥ್ವಿ ಅಂಶವನಳಿದು ಚಿತ್ಪೃಥ್ವಿಯಂಗವಾಗಿ ಭೃತ್ಯಾಚಾರ ನೆಲೆಸಿದುದೇ ಆಚಾರಲಿಂಗಸಂಬಂಧ. ಅಪ್ಪುವಿನಂಶವನಳಿದು ಚಿದಪ್ಪುವೇ ಅಂಗವಾಗಿ ಗಣಾಚಾರ ನೆಲೆಸಿದುದೇ ಗುರುಲಿಂಗಸಂಬಂಧ. ಅಗ್ನಿಯಂಶವನಳಿದು ಚಿದಗ್ನಿಯೇ ಅಂಗವಾಗಿ ಶಿವಾಚಾರ ನೆಲೆಸಿದುದೇ ಶಿವಲಿಂಗಸಂಬಂಧ. ವಾಯುವಿನಂಶವನಳಿದು ಚಿದ್ವಾಯುವೇ ಅಂಗವಾಗಿ ಸದಾಚಾರ ನೆಲೆಸಿದುದೇ ಜಂಗಮಲಿಂಗಸಂಬಂಧ. ಆಕಾಶದಂಶವನಳಿದು ಚಿದಾಕಾಶವೇ ಅಂಗವಾಗಿ ಲಿಂಗಾಚಾರ ನೆಲೆಸಿದುದೇ ಪ್ರಸಾದಲಿಂಗಸಂಬಂಧ. ಇಂತು ಪಂಚಾಚಾರ ಪಂಚತತ್ವವಳಿದುಳಿದು ನೆಲೆಸಿ ಪಂಚಲಿಂಗಸಂಬಂಧವಾದಲ್ಲಿ ಆತ್ಮನಂಶವನಳಿದುಳಿದು ಸರ್ವಾಚಾರಸಂಪತ್ತು ನೆಲೆಸಿ ಮಹಾಲಿಂಗಗುರುನಿರಂಜನ ಚನ್ನಬಸವಲಿಂಗ ಸಂಬಂಧವಾಯಿತ್ತು ಮಾಹೇಶ್ವರಂಗೆ.