Index   ವಚನ - 267    Search  
 
ಶ್ರೇಷ್ಠ ಶಿವಭಕ್ತರೆಂದು ಇಷ್ಟಲಿಂಗವ ಕೆಳಗೆ ಮಾಡಿ, ಸೃಷ್ಟಿಯೊಳಿಟ್ಟ ಸ್ಥಾವರಕ್ಕೆರಗಿ, ಮುಟ್ಟಿಹಾರುವ, ಜೈನ, ರಾಜ, ಮಂತ್ರಿ, ಹಿರಿಯರುಗಳೆಂದು ಪೆಟ್ಟುಪೆಟ್ಟಿಗೆ ಶರಣೆಂದು ಹೊಟ್ಟೆಯ ಹೊರೆದು ನರಕಸಮುದ್ರದೊಳ್ಮುಳುಗಾಡುವ ದುರ್ಭವಿಗಳಿಗೆತ್ತಣ ಲಿಂಗಭಕ್ತಿಯಯ್ಯಾ ಗುರುನಿರಂಜನ ಚನ್ನಬಸವಲಿಂಗಾ?