ತಾ ಭಕ್ತನಾಗಿ ಭವಿಯ ನಿರೀಕ್ಷಣೆಯ
ಮಾಡಿದರೆ ಒಂದನೆಯ ಪಾತಕ.
ಕೊಡುಕೊಳ್ಳುವ ವ್ಯವಹಾರ ಮಾಡಿದರೆ ಎರಡನೆಯ ಪಾತಕ.
ತಂದೆ, ಮಗ, ಸಹೋದರ, ನೆಂಟನೆಂದು
ನಡೆದರೆ ಮೂರನೆಯ ಪಾತಕ.
ಶಿವಪ್ರಸಂಗವ ಮಾಡಿದರೆ ನಾಲ್ಕನೆಯ ಪಾತಕ.
ಸಂಗಸಮರಸವ ಮಾಡಿದರೆ ಐದನೆಯ ಪಾತಕ.
ಇಂತು ಪಂಚಮಹಾಪಾತಕರಿಗೆ ಭಕ್ತನೆಂದರೆ ಭವತಪ್ಪದು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ.