Index   ವಚನ - 269    Search  
 
ಭವಿಯಕಳೆದು ಭಕ್ತನಾದೆವೆಂದು ಭವಿಯೊಡನೆ ಬೆರೆಸಿದವರಿಗೆಂದು, ಪರದ್ವಾರ ಹಿಂಸೆ ಹುಸಿ ಕಳವು ದುರ್ಭಕ್ಷಯುಕ್ತರಿಗೆಂದು, ಪರದೈವ ಪೂಜೆ, ಪರಸಮಯಚರಿತೆಯುಳ್ಳವರಿಗೆಂದು, ವೈತರಣಿ, ಕುಂಭಿ, ರೌರವಗಳಾಗಿರ್ದವು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.