Index   ವಚನ - 270    Search  
 
ಅಯ್ಯಾ, ತನುವಿತ್ತು ಮಗನೆಂದು ಮಾಡುವೆನಲ್ಲದೆ ಪ್ರಕೃತಿಗಿತ್ತೆನಾದರೆ ಕಷ್ಟದೊಳಗಿಕ್ಕು ದೇವ. ಮನವಿತ್ತು ಮಗನೆಂದು ಮಾಡುವೆನಲ್ಲದೆ ಪ್ರಕೃತಿಗಿತ್ತೆನಾದಡೆ ಕರ್ಮದೊಳಿಕ್ಕು ಲಿಂಗವೆ. ಪ್ರಾಣವನಿತ್ತು ಮಗನೆಂದು ಮಾಡುವೆನಲ್ಲದೆ ಪ್ರಕೃತಿಗಿತ್ತೆನಾದಡೆ ಮರಣದೊಳಿಕ್ಕು ಶಿವನೆ. ಅಯ್ಯಾ, ಎನ್ನ ತನು ಮನ ಪ್ರಾಣವೇ ಗುರುಲಿಂಗಜಂಗಮ. ಗುರುಲಿಂಗಜಂಗಮವೇ ಎನ್ನ ತನು ಮನ ಪ್ರಾಣ. ಇದಕ್ಕೆ ನೀವೇ ಸಾಕ್ಷಿ ಗುರುನಿರಂಜನ ಚನ್ನಬಸವಲಿಂಗಾ.