Index   ವಚನ - 271    Search  
 
ಪ್ರಾಣವ ಹಿಂಗಿ ಅಂಗಸುಖಿಸಲು ಪರಿಯಾವುದಯ್ಯಾ? ಚಿತ್ಪ್ರಾಣನಾಥನೆಂಬಾ ಚಿತ್ಪ್ರಕಾಶ ಜಂಗಮಲಿಂಗವನುಳಿದು, ಸತ್ಕ್ರಿಯಾಚಾರಸಂಬಂಧಿಗಳೆಂದರೆ ಸತ್ಯವಪ್ಪುದೇ? ಹುಸಿ ದುರ್ವಾಸನೆಯಾಗಿ ಹೋಗುವದು. ನಾನಿಂತಲ್ಲ ನಿತ್ಯವಾಗಿರ್ದೆ ನಿನ್ನಂಗವಿಡಿದು ಗುರುನಿರಂಜನ ಚನ್ನಬಸವಲಿಂಗಾ.