Index   ವಚನ - 274    Search  
 
ನೀತಿಯನರಿಯದ ಸೂತಕಪ್ರಾಣಿಗಳಿಗೆ ಅಜಾತಗುರೂಪದೇಶ ಅಳವಡುವುದೇ? ಅದೆಂತೆಂದೊಡೆ, ಸಮ್ಯಕ್‍ಜ್ಞಾನದಿಂದೆ ಜಾತಿಸೂತಕವಳಿಯಲಿಲ್ಲ. ಕ್ರಿಯಾಘನ ಗುರುವಿನಿಂದೆ ಜನನ ಸೂತಕವಳಿಯಲಿಲ್ಲ. ಲಿಂಗ ಕ್ರಿಯಾಸಂಪರ್ಕದಿಂದೆ ರಜಸೂತಕವಳಿಯಲಿಲ್ಲ. ಜಂಗಮ ಪಾದೋದಕ ಪ್ರಸಾದದಿಂದ ಉಚ್ಫಿಷ್ಟ ಸೂತಕವಳಿಯಲಿಲ್ಲ. ಮಹಾಘನದೊಳ್ಮನೋರ್ಲಯವಾಗಿ ಪ್ರೇತಸೂತಕವಳಿಯಲಿಲ್ಲ. ಇಂತು ಪಂಚಸೂತಕವಳಿಯದೆ ಪಂಚೇಂದ್ರಿಯ ಪ್ರಪಂಚಸೂತಕದೊಳ್ಮುಳುಗಿ ಪಂಚಾಚಾರಸಂಬಂಧಿಗಳೆಂದರೆ ನಾಚಿ ನಗುತಿರ್ದರು ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಶರಣರು.