Index   ವಚನ - 282    Search  
 
ಆಡಬಂದ ಮೂರ್ತಿಗೆ ಕೂಡಿ ಮಾಡಬಲ್ಲವರಾರಯ್ಯಾ? ಮಾತು ನೀತಿಯ ಕೇಳಿ, ಜಾತಿ ಮೂಲ ಜಂಜಡವೊಂದೆ ಮಾಡಿ ಲಾಭವನುಂಬ ಹಾದಿಯ ಹಿರಿಯರಂತಿರಲಿ ನೀಡಿಯಾಡದೆ ಕೊಟ್ಟು ಕಾಣುವ ದಿಟ್ಟಗಲ್ಲದೆ ಬಟ್ಟೆಗಳ್ಳರಿಗೆಂತೊಲಿವ ನಮ್ಮ ಗುರುನಿರಂಜನ ಚನ್ನಬಸವಲಿಂಗ?