Index   ವಚನ - 285    Search  
 
ಡಂಭಕರೊಂದು ಲಿಂಗವ ಕೊಂಡು ಮಂಡಲದೊಳಗಾಡುವರಯ್ಯಾ. ಒಡೆಯನ ಪೂಜೆಯ ಮಾಡುವರಯ್ಯಾ. ಹೊತ್ತಾರೆದ್ದು ಕ್ಷೇತ್ರ ಮನೆಕೆಲಸವ ಮುಂದಿಟ್ಟು, ಒಂದೊಂದು ಕುರುಹ ಮುಂದಿಟ್ಟು ಸಂಧಿಸಿ ಮಾಡಿಕೊಂಬ ಬಂಧಮೋಹಿಗಳ ಪೂಜೆ ಎಂದೆಂದು ನಿಮ್ಮ ಕಾಣಲರಿಯದು. ಮತ್ತೆಂತೆಂದೊಡೆ, ಹಿಂದುಮುಂದಿನ ಸಂದೇಹವಳಿದು ಆನಂದಮುಖನಾಗಿ, ಆಯಾಯ ಕಾಲಕ್ಕೆ ಪೂಜಾರ್ಪಣವ ಪರಿಣಾಮಿಸಿ ನಿರಂತರಸಾವಧಾನಿಯಾದರೆ ಆತ ನಿಜವೆಂಬೆ ಗುರುನಿರಂಜನ ಚನ್ನಬಸವಲಿಂಗಾ.