Index   ವಚನ - 286    Search  
 
ಕಾಯವನರ್ಪಿಸಿಕೊಂಡವರೆಂದು ಹೇಳುವರು ಕರ್ಮಬಾಧೆಯಲ್ಲಿ ಮುಳುಗುವರು. ಮನವನರ್ಪಿಸಿಕೊಂಡವರೆಂದು ಹೇಳುವರು ಕರಣಗುಣಕಲ್ಪನೆಯೊಳೊಪ್ಪುವರು. ಪ್ರಾಣವನರ್ಪಿಸಿಕೊಂಡವರೆಂದು ಹೇಳುವರು ದಶವಾಯುಪ್ರಕೃತಿಯಲ್ಲಿ ವರ್ತಿಸುತ್ತಿಹರು. ಸರ್ವಾಂಗವನರ್ಪಿಸಿಕೊಂಡವರೆಂದು ಹೇಳುವರು. ಮಿಥ್ಯಾ ಸಂಸ್ಕೃತಿ ಭ್ರಾಂತಗೊಂಡಿಪ್ಪರು. ಇಂತೀ ಸಂತೆಯ ಮಾಡಿ ಹೋಗುವ ಸಕಲ ಪ್ರಾಣಿಗಳು ನಿಮಗೆಂತು ಅರ್ಪಿಸಿಕೊಂಬುವರಯ್ಯಾ ಗುರುನಿರಂಜನ ಚನ್ನಬಸವಲಿಂಗಾ?