Index   ವಚನ - 289    Search  
 
ಬಿಟ್ಟಾಡುವ ಮಡದಿಗೆ ಇಚ್ಫೆಗೈಯ್ದು ಕೊಟ್ಟು ಸುಖಿಸಿಕೊಂಬ ಪರಿಯಾವುದಯ್ಯಾ! ಲಿಂಗವನುಳಿದು ಅನ್ಯದೈವದೆಂಜಲಗೊಂಬ ಚನ್ನಕುನ್ನಿ ಗುರುನಿರಂಜನ ಚನ್ನಬಸವಲಿಂಗಕ್ಕಂಗವನಿತ್ತು ಮಂಗಲಗೊಂಬ ಇಂಗಿತವನೆತ್ತ ಬಲ್ಲದು ಹೇಳಾ!