Index   ವಚನ - 292    Search  
 
ಆದ್ಯರನುಭಾವ ಲಕ್ಷ ಬಂದಲ್ಲಿ ದಾಸೋಹಿಯಾಗಿರ್ದೆನು. ವೇದ್ಯರನುಭಾವ ಲಕ್ಷ ಬಂದಲ್ಲಿ ಪೂಜಿತನಾಗಿರ್ದೆನು. ಸಾಧ್ಯರನುಭಾವ ಲಕ್ಷ ಬಂದಲ್ಲಿ ಸೇವಕನಾಗಿರ್ದೆನು. ನೂತನಪುರಾತನರನುಭಾವ ಲಕ್ಷ ಬಂದಲ್ಲಿ ಗುರುನಿರಂಜನ ಚನ್ನಬಸವಲಿಂಗದಲ್ಲಿ ಸರ್ವಾಚಾರಸಂಪತ್ತಿನೊಳಿರ್ದೆ.