Index   ವಚನ - 294    Search  
 
ಅಯ್ಯಾ, ಎನ್ನ ಗುರುವಿನಲ್ಲಿ ಗುಣವನರಸಿ ಬೋಧೆಯ ಹೇಳಿ ನಡೆಸುವೆ. ಅಯ್ಯಾ, ಎನ್ನ ಲಿಂಗದಲ್ಲಿ ಶಿಲೆಯನರಸಿ ತಿದ್ದಿ ಕೈಯೊಳು ಹಿಡಿವೆ. ಅಯ್ಯಾ, ಎನ್ನ ಜಂಗಮದಲ್ಲಿ ಕುಲವನರಸಿ ಜರೆದು ಅನುಭಾವದೊಳಗಿರಿಸುವೆ. ಇಂತು ಎನ್ನ ಗುರುಲಿಂಗಜಂಗಮದ ಇಚ್ಫೆಯಲ್ಲಿರ್ದೆನಾದರೆ ಭವತಪ್ಪದೆಂದು, ಎನ್ನಿಚ್ಫೆಯಲಿರಿಸಿ ನಿಮ್ಮಲ್ಲಿ ಸುಖಿಯಾಗಿರ್ದೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ, ಧರ್ಮವೇ ಜಯವೆಂದು.