Index   ವಚನ - 295    Search  
 
ಅಯ್ಯಾ, ಅಭ್ಯಾಸ ಕಾಯದಿಂದೆ ವಸ್ತುವ ಕಂಡವರೆಂದು ಬಂಧನದೊಳು ಬಿದ್ದುಹೋಗುವ ತುಂಡಜ್ಞಾನದ ಪಶುಗಳನೇನೆಂಬೆನಯ್ಯಾ! ಕಾಣಲಿಲ್ಲದ ಲಿಂಗವ ಕಂಡವರುಂಟೆ? ಮತ್ತೆಂತೆಂದೊಡೆ, ಸಕಳ ನಿಃಕಳಾನುಮತಕ್ಕಗೋಚರ ಅನುಪಮ ಶಿವನನುಗ್ರಹತ್ರಯವೆಂಬ ಸರ್ವಕಲಾಭಿಜ್ಞತೆಯೊಳ್ಮೂಡಿದ ಭಾವಲಿಂಗವು, ಕೋಟಿ ಸೋಮಸೂರ್ಯಾಗ್ನಿ ಪ್ರಕಾಶವಾಗಿ ತೋರುತಿದ್ದಿತ್ತು. ವಿದ್ಯಾ ವಿನಯಸಂಪನ್ನತೆಯೊಳ್ಮೂಡಿದ ಪ್ರಾಣಲಿಂಗವು ಕೋಟಿ ಸೋಮಸೂರ್ಯಾಗ್ನಿ ಪ್ರಕಾಶವಾಗಿ ತೋರುತಿದ್ದಿತ್ತು. ವೀರಶೈವೋತ್ತಮತೆಯೊಳ್ಮೂಡಿದ ಇಷ್ಟಲಿಂಗವು ಕೋಟಿ ಸೋಮಸೂರ್ಯಾಗ್ನಿ ಪ್ರಕಾಶವಾಗಿ ತೋರುತಿದ್ದಿತ್ತು. ಇಂತು ತ್ರಿವಿಧಲಿಂಗಪ್ರಕಾಶದೊಳ್ಮುಳುಗಿ ನಿತ್ಯಸುಖಿಯಾದೆನು ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣರೊಳಗೆ.