ಬಿಂದುಪ್ರಕಾಶ ನಾದಪ್ರಕಾಶ ಕಲಾಪ್ರಕಾಶ
ಭಾವಪ್ರಕಾಶವನವಧರಿಸಿದ ಅಚ್ಚಮಹೇಶ್ವರನ ಮಹದರುವಿನ ಮುಂದೆ,
ಕಾಮಾದಿ ಷಡ್ವರ್ಗಂಗಳಳಿದುಳಿದು ಬಂದು ಶರಣೆನುತ್ತಿಹವು,
ಅಸ್ತಿತೆಯಾದಿ ಷಡ್ಭಾವವಿಕಾರಂಗಳೆಲ್ಲ ಅಳಿದುಳಿದು
ಮಹಾನುಭಾವಕ್ಕೆ ಆಸ್ಪದವಾಗಿಹವು.
ಪಂಚೇಂದ್ರಿಯಂಗಳಳಿದುಳಿದು ಪೂರ್ವದವರ ಮೇಲೆ
ಶಸ್ತ್ರವ ಪಿಡಿದು ಶರಣೆನುತ್ತಿಹವು.
ದಶವಾಯುಗಳೆಲ್ಲ ಅಳಿದುಳಿದು ಪೂರ್ವದವರ ಮೇಲೆ
ಮುನಿದು ನಮೋ ನಮೋ ಎನುತ್ತಿಹವು.
ಕರಣ ಸಮೂಹಂಗಳಳಿದುಳಿದು
ಸಹಾಯಿಗಳಾಗಿ ಶರಣೆನುತ್ತಿಹವು.
ಕರ್ಮೇಂದ್ರಿಯಂಗಳಳಿದುಳಿದು
ಸದ್ಭಕ್ತರಾಗಿ ಸೇವೆಯನೆಸಗುತ್ತಿಹವು.
ಪಂಚವಿಷಯಂಗಳಳಿದುಳಿದು
ಸುಖವದೋರಿ ಆನಂದಿಸುತ್ತಿಹವು.
ಇಂತು ಸಕಲಸನುಮತಸಂಬಂಧಿ
ಗುರುನಿರಂಜನ ಚನ್ನಬಸವಲಿಂಗ.
Art
Manuscript
Music
Courtesy:
Transliteration
Binduprakāśa nādaprakāśa kalāprakāśa
bhāvaprakāśavanavadharisida accamahēśvarana mahadaruvina munde,
kāmādi ṣaḍvargaṅgaḷaḷiduḷidu bandu śaraṇenuttihavu,
astiteyādi ṣaḍbhāvavikāraṅgaḷella aḷiduḷidu
mahānubhāvakke āspadavāgihavu.
Pan̄cēndriyaṅgaḷaḷiduḷidu pūrvadavara mēle
śastrava piḍidu śaraṇenuttihavu.
Daśavāyugaḷella aḷiduḷidu pūrvadavara mēle Munidu namō namō enuttihavu.
Karaṇa samūhaṅgaḷaḷiduḷidu
sahāyigaḷāgi śaraṇenuttihavu.
Karmēndriyaṅgaḷaḷiduḷidu
sadbhaktarāgi sēveyanesaguttihavu.
Pan̄caviṣayaṅgaḷaḷiduḷidu
sukhavadōri ānandisuttihavu.
Intu sakalasanumatasambandhi
guruniran̄jana cannabasavaliṅga.
ಸ್ಥಲ -
ಮಾಹೇಶ್ವರನ ಪ್ರಾಣಲಿಂಗಿಸ್ಥಲ