Index   ವಚನ - 321    Search  
 
ಅಂಗದಿಚ್ಫೆಗೆ ಅನುಸರಣೆವಿಡಿದು ಲಿಂಗಪಂಚಾಚಾರ ಗತಿಗೆಡಿಸಿದಲ್ಲಿ ಗುರುಕರುಣಯೆಲ್ಲಿಹುದೊ! ಷಟ್‍ಸ್ಥಲಸಂಬಂಧವೆಲ್ಲಿಹುದೋ? ಅಷ್ಟಾವರಣದವಿರಳಸುಖವೆಲ್ಲಿಹುದೋ? ಗುರುನಿರಂಜನ ಚನ್ನಬಸವಲಿಂಗದ ನಿಜವೆಲ್ಲಿಹುದೋ?