Index   ವಚನ - 326    Search  
 
ಅಷ್ಟಾಂಗವಾದ ಮಾಹೇಶ್ವರನ ಸರ್ವಾಂಗವೆಲ್ಲ ಲಿಂಗವೆಯಾಗಿರ್ಪುದು. ಅದೆಂತೆಂದೊಡೆ : ವ್ಯಾಲಗರಳ ಸೋಂಕಿದಂಗ ಸರ್ವಮಯವಾದಂತೆ. ಶ್ರದ್ಧೆ ನಿಷ್ಠೆಯೊಳೊಂದಿ ಅಂಗವಾದಲ್ಲಿ ಸಾವಧಾನನುಭಾವ ಆನಂದ ಸಮರಸ ಪ್ರಾಣವಾಗಿರಲು ಗುರುನಿರಂಜನ ಚನ್ನಬಸವಲಿಂಗವು ಎತ್ತೆತ್ತ ನೋಡಿದಡತ್ತತ್ತ ತಾನೆ.