Index   ವಚನ - 325    Search  
 
ನಿಷ್ಠೆಯಿಲ್ಲದ ಪೃಥ್ವಿ ಜಡ, ನಿಷ್ಠೆಯಿಲ್ಲದ ಅಪ್ಪು ಜಡ, ನಿಷ್ಠೆಯಿಲ್ಲದ ಅಗ್ನಿ ಜಡ, ನಿಷ್ಠೆಯಿಲ್ಲದ ವಾಯು ಜಡ, ನಿಷ್ಠೆಯಿಲ್ಲದ ಆಕಾಶ ಜಡ, ನಿಷ್ಠೆಯಿಲ್ಲದ ಆತ್ಮ ಜಡ. ಇಂತು ಷಡ್ಭೂತದಲ್ಲಿ ನಿಷ್ಠೆರಹಿತವಾಗಿರ್ದು ಷಟ್‍ಸ್ಥಲಜ್ಞಾನಿಗಳೆಂದರೆ ಮನೋಮೂರ್ತಿ ಮಹಾಲಿಂಗಮುರ್ತಿಯಾಗಿರ್ಪನು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.