Index   ವಚನ - 334    Search  
 
ಮೂರುಮುಖದಗ್ನಿಯ ಸುಟ್ಟು, ಮೂರುಬಣ್ಣದ ಹೇಸಿಕೆಯ ತೊಳೆದು, ಮೂರು ಮನೆಯಲ್ಲಿ ದೇವರ ಪೂಜೆಯ ಮಾಡಿ, ಇದ್ದುದ ಕಳಚದೆ ಸಂಚಲವಳಿದು, ಸಮರ್ಪಿಸಿಕೊಳ್ಳಬಲ್ಲ ಸಗುಣ ನಿರ್ಗುಣ ಸಂಪನ್ನಂಗಲ್ಲದೆ ಸಾಧ್ಯವಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗ.