Index   ವಚನ - 333    Search  
 
ಆದಾದಿಷ್ಟಮುಖದಿಂ ಸಾಧಿಸಿಕೊಂಡು ಬಂದ ಇಷ್ಟಲಿಂಗವನು ಮಕುಟಸ್ಥಾನದಲ್ಲಿ ಧರಿಸಿ, ನಿರಹಂಕಾರವೆಂಬ ಹಸ್ತಕ್ಕೆ ಸಾಧಿಸಿ ಬಂದ ಸಕಲನಿಃಕಲತತ್ವ ಪದಾರ್ಥವನು, ಇಚ್ಛಾಶಕ್ತಿಸಮೇತ ಸಾವಧಾನಭಕ್ತಿಯುಕ್ತವಾಗಿ ಅಳಿದುಳಿದು ಅರ್ಪಿಸಿ ಭೋಗಿಸುತ್ತಿಹನು ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಪ್ರಸಾದಿಶರಣ.