ಆದಿಯ ಪ್ರಸಾದವ ಸಾಧಿಸಿಕೊಂಡು ಬಂದವರೆಂದು
ಸಮಯಾಚಾರದಲ್ಲಿ ಬಲ್ಲಬಲ್ಲಂತೆ ಅಲ್ಲಲ್ಲಿ ಗಾಚರಿಸಿ,
ಧೂಮ್ರ ಸೇವನೆ, ಭಂಗಿ, ಅಪು, ಮಧುಪಾನಕ,
ನಾಶಿಕಹುಡಿಯನೇರಿಸಿಕೊಂಬ
ಕತ್ತೆ ಕರ್ಮಭವಿ ಶುನಕ ಜನರಿಗೆ ಸಾಧ್ಯವಪ್ಪುದೆ?
ಅಸಾಧ್ಯ ಅನುಪಮಪ್ರಸಾದ.
ಅನಾದಿ ಸಂಸಿದ್ಧ ನಿರಂಜನಪ್ರಸಾದಿಯೇ
ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಹಜ ಕಾಣಾ.
Art
Manuscript
Music
Courtesy:
Transliteration
Ādiya prasādava sādhisikoṇḍu bandavarendu
samayācāradalli ballaballante allalli gācarisi,
dhūmra sēvane, bhaṅgi, apu, madhupānaka,
nāśikahuḍiyanērisikomba
katte karmabhavi śunaka janarige sādhyavappude?
Asādhya anupamaprasāda.
Anādi sansid'dha niran̄janaprasādiyē
guruniran̄jana cannabasavaliṅgadalli sahaja kāṇā.