ಹಡೆದವರಿಂದೆ ಪಡೆದ ಪ್ರಸಾದವ ಹಿಡಿದುಕೊಟ್ಟು,
ನೋಡಿಕೊಟ್ಟು, ತಿಳಿದುಕೊಟ್ಟು, ನಿತ್ಯಸುಖಿಸುವನಲ್ಲದೆ
ಜಡದೇಹದೊಡವೆಯ ಸುಖವಿಡಿದು ಒಡೆಯರ ಪ್ರಸಾದವ ಪಡೆದವರೆಂದು
ಓಗರವ ಗಡಣಿಸಿಕೊಂಡು ಮೃತ್ಯುಂಜಯಲಿಂಗಕ್ಕೆ
ತೋರಿ ತೋರಿ ಉಂಬ
ಡಂಭಕನಂತಲ್ಲ ಗುರುನಿರಂಜನ
ಚನ್ನಬಸವಲಿಂಗ ನಿಮ್ಮ ಪ್ರಸಾದಿ
Art
Manuscript
Music
Courtesy:
Transliteration
Haḍedavarinde paḍeda prasādava hiḍidukoṭṭu,
nōḍikoṭṭu, tiḷidukoṭṭu, nityasukhisuvanallade
jaḍadēhadoḍaveya sukhaviḍidu oḍeyara prasādava paḍedavarendu
ōgarava gaḍaṇisikoṇḍu mr̥tyun̄jayaliṅgakke
tōri tōri umba
ḍambhakanantalla guruniran̄jana
cannabasavaliṅga nim'ma prasādi